Posts

Showing posts with the label Reactive

೧. ಫಲಿತಾಂಶ

ಸೂಜಿ, ಚುಚ್ಚುಮದ್ದಿಗೆ ಹೆದರುವ ನಾನು ಇಲ್ಲಿಯವರೆಗೆ ಅಂದರೆ ನನ್ನ ೩೬ ವಯ್ಯಸ್ಸಿನವರೆಗೂ  ಬೆರೆಳೆಣಿಕೆಯಷ್ಟೇ ಚುಚ್ಚುಮದ್ದು  ಹಾಕಿಸಿಕೊಂಡಿರಬಹುದು. ಅವತ್ತು ನನ್ನ ಕೈಯಿಂದ ರಕ್ತವನ್ನು ಒಂದು ಪ್ಲಾಸ್ಟಿಕ್ ಸೀಸೆಯಲ್ಲಿ ಮೆಲ್ಲಗೆ ನಗುನಗುತಾ, ನೋವಾಗದಂತೆ ಹೀರಿಕೊಂಡ ಷೂಶ್ರುಕಿ ಅಷ್ಟೇನೂ ಕ್ರೂರಿಯಾಗಿ ಕಾಣಲಿಲ್ಲ ಆದರೆ ಅವಳು ಮಾಡಿದ ರಕ್ತ ಪರೀಕ್ಷೆಯ ಫಲಿತಾಂಶ ಮಾತ್ರ ತುಂಬಾ ಕ್ರೂರವಾಗಿ ನೋವನ್ನು ಕೊಟ್ಟಿತ್ತು. ಆ ಕ್ರೂರತೆ ನನ್ನಲ್ಲಿ ಎಂದೂ ಕಾಣದ ಒಂದು ಭಯ ಮತ್ತು ದುಃಖಗಳನ್ನು ತಂದಿಟ್ಟಿತ್ತು. ರಕ್ತ ಪರೀಕ್ಷೆಯ ಫಲಿತಾಂಶವನ್ನು ನನಗೆ ಆಘಾತವಾಗದ ರೀತಿಯಲ್ಲಿ ಹೇಳಲು ನನ್ನೆದುರಿಗೆ ಕುಳಿತ ವ್ಯಕ್ತಿ ನನಗೆ ಫಲಿತಾಂಶ ತಿಳಿಸಿ ಕೌನ್ಸೆಲಿಂಗ್ ಮಾಡಿ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದ. "ಇದೇನೂ ಅಷ್ಟು ಭಯ ಬೀಳುವಂತಹ ರೋಗವಲ್ಲ, ಈಗ ಇದಕ್ಕೆ ಔಷಧಿಯಿದೆ, ಸಂಪೂರ್ಣ ಗುಣವಾಗದಿದ್ದರೂ, ನೀವು ಸಾಮಾನ್ಯ ಜೀವನ ನಡೆಸಬಹುದು" ಅಂತ ಪರಿ ಪರಿಯಾಗಿ ಹೇಳುತಿದ್ದ. ಅದೆಲ್ಲ ನನಗೆ ಆವಾಗ ಗೊತ್ತಿಲ್ಲದ  ವಿಷಯವಾಗಿದ್ದರೂ ಆ ಘಳಿಗೆಯಲ್ಲಿ ನನಗೆ ಅವನು ಹೇಳುವ ಯಾವುದೇ ವಿಷಯವನ್ನು ಅರಿತುಕೊಳ್ಳುವ ಅಥವಾ ಅವನ ಸಮಾಧಾನದ ಸಾಂತ್ವನದ ಮಾತು ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. "ನೀವು ಆಘಾತಕ್ಕೊಳಗಾಗ ಬೇಡಿ, ಧೈರ್ಯದಿಂದಿರಿ" ಎಂದು ಅವನು ಒತ್ತಿ  ಹೇಳುತ್ತಿದ್ದ. ನನ್ನ ತಲೆಯಲ್ಲಿ ಏನು ಓಡುತ್ತಿತ್ತೋ, ಒಟ್ಟಾರೆ ತುಂಬಾ ಖಾ...