Posts

Showing posts with the label HIV expert

೩. ತಜ್ಞರ ಭೆಟ್ಟಿ

ಬೆಂಗಳೂರಿನ ಹಿರಿಯ ತಜ್ಞ ವೈದ್ಯರೊಬ್ಬರನ್ನು ಭೆಟ್ಟಿಯಾಗಲು ಅವರ ಅಪ್ಪೋಯಿಂಟ್ಮೆಂಟ್ ತೆಗೆದುಕೊಂಡೆ. ಅವರ ಮನೆಯಲ್ಲೇ ಇರುವ ಅವರ ಕ್ಲಿನಿಕ್ ಗೆ ಹೋದರೇ, ಅಲ್ಲಿ ಸುಮಾರು ೭-೮  ಜನ ನನಗಿಂತ ಮುಂಚೆನೇ ಬಂದು ಕುಳಿತಿದ್ದರು, ನನ್ನ ನಂತರ ಇನ್ನೂ ೫-೬ ಜನರು ಬಂದರು. ನನ್ನ ಸರದಿ ಬಂದ ಮೇಲೆ ನಾನು ವೈದ್ಯರ ಕೋಣೆಗೆ ಹೋದೆ. ಅಲ್ಲಿಯವರೆಗೂ ಮಾಡಿಸಿದ ರಕ್ತ ತಪಾಸಣಾ ಪತ್ರಗಳನ್ನುಅನುಕ್ರಮವಾಗಿ ಮುಂಚೆಯ ಜೋಡಿಸಿಟ್ಟಿದ್ದೆ, ಅವನ್ನೆಲ್ಲ ಹಾಗೆಯೇ ಅವರ ಕೈಗಿಟ್ಟು ನಾನು ಹೇಳಿದೆ "ಎರಡು ವಾರದಲ್ಲಿ ಮಾಡಿಸಿದ ಪರೀಕ್ಷೆಗಳು" ಅಂತ. ಬೇಗ ಬೇಗನೆ ಅವೆಲ್ಲದರ ಮೇಲೆ ಕಣ್ಣಾಡಿಸಿ, "ನೀವು ಸ್ವಲ್ಪ ಹೊತ್ತು ಆಚೆ ಕುಳಿತುಕೊಂಡು ಇರವ ಎಲ್ಲಾ ಅಪ್ಪೋಯಿಂಟ್ಮೆಂಟ್ ಗಳು ಮುಗಿದ ಮೇಲೆ ಬರ್ತಿರಾ? ಯಾಕೆಂದರೆ ನಿಮ್ಮದು ಸಮಯ ತೆಗೆದುಕೊಳ್ಳುತ್ತದೆ" ಅಂದರು.ನಾನು ಹಾಗೆಯೇ ಮಾಡಿದೆ. ನಾನು ಆಗಲೇ ಒಂದು ಘಂಟೆ ಕಾದು ಕೂತಿದ್ದೆ. ಮತ್ತೆ ಅವರು ಈ ರೀತಿ ಹೇಳಿದ ಮೇಲೆ ಇನ್ನೂ ಒಂದುವರೆ ಘಂಟೆ ಕಾಯುತ್ತಾ ಕುಳಿತೆ. ಏನು ಮಾಡಲಿಕ್ಕಾಗುತ್ತೆ? ನನ್ನ ಹಣೆಬರಹದಲ್ಲಿ ಇನ್ನು ಏನೇನಿದೆಯೋ ಅಂತ ಯೋಚಿಸುತ್ತಾ ಹಾಗೆ ಕುಳಿತೆ. ಎಲ್ಲರ ಸರದಿ ಮುಗಿದ ಮೇಲೆ, ನಾನೊಬ್ಬನೇ ಉಳಿದ ನಂತರ, ನಾನು ಮತ್ತೆ ಕೋಣೆ ಒಳಕ್ಕೆ ಹೋದೆ. ಸುಧೀರ್ಘ ೪೫ ನಿಮಿಷಕ್ಕೂ ಹೆಚ್ಚು ಕಾಲ ಅವರ ಜೊತೆ ನನ್ನ ಚರ್ಚೆ ನಡೆಯಿತು. ರೇಖಾ ಚಿತ್ರದ ಮೂಲಕ ವೈರಾಣು ದೇಹವನ್ನು ಸೇರಿದ ಗಳಿಗೆಯಿಂದ ದೇಹದಲ್ಲಿ ಜೀವ ಇ...