೫. ಸಮಸ್ಥಿತಿಯ ಇತರರು (ನನ್ನಂಥವರ ಜೊತೆ ಚರ್ಚೆ)
ವಿಷಯ ತಿಳಿದ ೭-೮ ದಿನಗಳಲ್ಲಿ ನನ್ನ ವೈದ್ಯ ಮಿತ್ರ ನನಗೆ ಒಂದು ಸಲಹೆ ಕೊಟ್ಟ "ಕೆಲವು ಅಂತರ್ಜಾಲದಲ್ಲಿರುವ ಸಮೂಹಗಳಲ್ಲಿ ನೊಂದಾಯಿಸಿಕೊ, ಅಲ್ಲಿ ಆಗಲೇ ನೊಂದಾಯಿತ ಜನರ ಜೊತೆ ಚರ್ಚಿಸು, ಮಾಹಿತಿ ಕಲೆ ಹಾಕು, ನಿನಗೆ ಆತ್ಮ ವಿಶ್ವಾಸ ಹೆಚ್ಚುತ್ತದೆ" ಅಂತ. ಮೊದಲಿಗೆ ನನಗೆ ಯಾರು ಏನೇ ಹೇಳಿದರೂ ನನ್ನ ತಲೆಗೆ ಹತ್ತುತ್ತಿರಲಿಲ್ಲ. ಹಾಗೆಯೇ ಈ ಸಲಹೆಯ ಬಗ್ಗೆ ಕೂಡ ನಾನು ಅಷ್ಟಾಗಿ ಯೋಚಿಸಲಿಲ್ಲ. ಆದರೆ ನನಗೆ ಆಯುರ್ವೇದ ಔಷಧಿಯ ಮಾಹಿತಿ ಎಲ್ಲೂ ಸಿಗದಿದ್ದಾಗ ನನಗೆ ನನ್ನ ಮಿತ್ರ ಹೇಳಿದ ಸಲಹೆ ನೆನಪಾಗಿ ಒಂದು ಆಲೋಚನೆ ಹೊಳೆಯಿತು. ಯಾಕೆ ನಾನು ಅಂತರ್ಜಾಲದ ಸಮೂಹದಲ್ಲಿರುವವರನ್ನು ಆಯುರ್ವೇದ ಔಷಧಿ ಬಗ್ಗೆ ಖುದ್ದಾಗಿ ಕೇಳಬಾರದು. ಹಾಗೆ ಯೋಚಿಸಿದ್ದೆ ತಡ, ನಾನು ತಕ್ಷಣ ಒಂದು ಸಾಮಾಜಿಕ ತಾಣದಲ್ಲಿ ನನ್ನದೊಂದು ಮಿಥ್ಯ ಖಾತೆ ತೆರೆದೆ. ನಿಧಾನಕ್ಕೆ ಒಂದೊಂದಾಗಿ ಹಲವು ಜನರ ಸಂಪರ್ಕ ಸಾಧ್ಯವಾಯಿತು. ನಾನು ಎಷ್ಟು ಜನರನ್ನು ಮಾಹಿತಿಗೋಸ್ಕರ ಸಂಪರ್ಕಿಸಿದೆನೋ ಅವರೆಲ್ಲ ಅಲ್ಲೊಪಥಿ ಔಷಧಿಯನ್ನೇ ಅವಲಂಭಿಸದವರಾಗಿದ್ದರು. ಒಂದಿಬ್ಬರು ಪ್ರಾರಂಭದಲ್ಲಿ ಆಯುರ್ವೇದ ಔಷಧಿ ತೆಗೆದುಕೊಂಡರೂ ಅವರು ಕೂಡ ಸ್ವಲ್ಪ ಸಮಯದ ನಂತರ ಅಲ್ಲೊಪಥಿಗೆ ಶರಣಾಗಿದ್ದರು. ಅಲ್ಲೊಪಥಿ ಅವಲಂಬನೆ ಎಲ್ಲರಿಗೂ ಅನಿವಾರ್ಯವಾಗಿತ್ತು. ಮೊದಲೆಲ್ಲ ಈ ರೀತಿ ಸಿಕ್ಕವರು ಕೂಡ ಎಆರ್ಟಿಯೇ ಒಳ್ಳೆಯದು ಅದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಹೇಳುವವರೇ ಇದ್ದರು. ನಂತರ ಕೆಲವು ವಿಚಿತ್ರ ಹಾಗೂ ವಿ