Posts

Showing posts from September, 2016

೭. ಖಾದ್ಯಗಳು

ಶುದ್ಧ ಶಖಾಹಾರವನ್ನು ಪಾಲಿಸುತ್ತಿದ್ದ ನಾನು ಆಹಾರ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಬೇಕಾಗಿತ್ತು, ಯಾಕೆಂದರೆ ನನಗೆ ಹಣ್ಣುಗಳನ್ನು ತಿನ್ನುವ ಅಭ್ಯಾಸವೇ ಇರಲಿಲ್ಲ. ಹಣ್ಣುಗಳಿಗಿಂತ ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ತಿನ್ನುವುದೇ ನನ್ನ ರೂಢಿಯಾಗಿತ್ತು. ಮೊದಲ ಬಾರಿ ಕೌನ್ಸಲಿಂಗ್ ಮಾಡಿದ ಸರಕಾರಿ ಅಸ್ಸ್ಪತ್ರೆಯ ಆ ಮಹಿಳೆ ದಿನಾಲೂ ಒಂದು ಕಿವಿ ಹಣ್ಣನ್ನು ತಿನ್ನಲು ಸಲಹೆಯಿತ್ತಿದ್ದಳು. ಹಾಗೆಯೇ ನಂತರದ ಅಲ್ಲೊಪಥಿ ಮತ್ತು ಆಯುರ್ವೇದದ ವೈದ್ಯರೆಲ್ಲರೂ ಕೂಡ ದಿನಾಲೂ ಒಂದಾದರು ಹಣ್ಣು ತಿನ್ನಬೇಕು ಅಂತ ಸೂಚಿಸಿದ್ದರು. ಹಾಲನ್ನು ನಿಯಮಿತವಾಗಿ ದಿನಾಲೂ ಕುಡಿಯಲು ಮತ್ತೆ ಪ್ರಾರಂಭಿಸಿದೆ. ವೈದ್ಯರು ಹೇಳಿದಂತೆ ದಿನಕ್ಕೆ ಒಂದು ಲೀಟರ್ ಕುಡಿಯುವದು ನನಗಾಗದಿದ್ದರೂ ಅರ್ಧ ಲಿಟರ್ ಕುಡಿಯುವದನ್ನು ತಪ್ಪದೇ ರೂಡಿಯಾಗಿಸಿಕೊಂಡೆ. ಚವನ ಮಹರ್ಷಿಯ ಸೂತ್ರದಿಂದ ತಯಾರಾದ ಚವನ ಪ್ರಾಶವನ್ನು ಸೇವಿಸಿದರೆ ರೋಗ ನಿಯಂತ್ರಕ ಶಕ್ತಿ ವೃದ್ಧಿಸುವದು ಅಂತ ಓದಿ ತಿಳಿದಿದ್ದೆ. ಈ ವಿಷಯ ಮುಂಚೆಯಿಂದಲೂ ಗೊತ್ತಿದ್ದರೂ ನಾನು ಚವನ್ ಪ್ರಾಶ ಎಂದೂ ಸೇವಿಸಿರಲಿಲ್ಲ. ಆದರೆ  ಈಗ ತಕ್ಷಣ ಅದನ್ನು ತಂದು ಅವತ್ತಿನಿಂದ ತಪ್ಪದೇ ದಿನಾಲೂ ಎರಡು ಚಮಚ  ಸೇವಿಸುವದನ್ನುರೂಢಿಯಾಗಿಸಿಕೊಂಡೆ. ಮನೆಯಲ್ಲಿ ಒಂದು ಹಿಡಿಯಷ್ಟು ಮೊಳಕೆ ಕಾಳುಗಳನ್ನು ಮಾಡಿ ದಿನಾಲು ತಿನ್ನಲು ಪ್ರಾರಂಭಿಸಿದೆ. ಒಂದು ದಿನ ಮುಕಣಿ ಇನ್ನೊಂದು ದಿನ ಹೆಸರುಕಾಳು ಮತ್ತೊಂದು ದಿನ ಅಲಸಂದಿ ಮಗದೊಂದು

೬. ನನ್ನ ಸೂತ್ರ

ವೈರಾಣು ಪತ್ತೆಯ ಪರೀಕ್ಷಾ ಫಲಿತಾಂಶದ ನಂತರ, ವ್ಯಕ್ತಿಯ ಮಾನಸಿಕ ಬದಲಾವಣೆಗಳು ಹೇಗಾಗುತ್ತದೆ ಅನ್ನುವದಕ್ಕೆ ಮೂರು ಹಂತದ ಒಂದು ಸೂತ್ರವನ್ನು ನಾನೇ ಬರೆದುಕೊಂಡೆ. Shock -  ಆಘಾತ,  Worry - ಖೇದ, Accept - ಸ್ವೀಕೃತಿ. ಈ ವಿಷಯ ತಿಳಿದಾಕ್ಷಣ ಎಲ್ಲರಿಗೂ ಆಘಾತವಾಗುವದು ಸಹಜವೇ. ನನಗೆ ಹೀಗಾಯಿತಲ್ಲಾ, ನಾನು ಸಾವನ್ನು ಬರಮಾಡಿಕೊಳ್ಳುತ್ತಿದ್ದೀನಲ್ಲಾ. ನಾನು ಸಾಯುತ್ತೇನೆ ಅನ್ನುವ ಮಾರಣಾಂತಿಕ ವಿಚಾರವೇ ಮೊದಲು ಮನಸ್ಸಿಗೆ ಬರುವದು. ನಾಳೆನೆ ಸಾಯುತ್ತೇನೆ ಹಾಗನ್ನಿಸುವದು. ಎಷ್ಟೋ ಜನರಿಗೆ ರಾತ್ರಿ ನಿದ್ದೆಯೇ ಬರಲಿಲ್ಲವಂತೆ. ನಾನಂತೂ ಮಲಗುವ ಪ್ರಯತ್ನ ಕೂಡ ಮಾಡಲಿಲ್ಲ.  ಇಂತಹ ಆಘಾತ ಯಾರಿಗೂ ಆಗದಿರಲಿ. ನಿಧಾನಕ್ಕೆ ಈ ಆಘಾತ ದುಃಖವಾಗಿ ಬದಲಾಗುವದು. ಸಾವಿನ ಚಿಂತೆಯಿಂದ ಸ್ವಲ್ಪ ಹಿಂದೆ ಸರಿದು, ಸಾವಿನ ಮುಂಚಿನ ಕಷ್ಟ ನೋವುಗಳನ್ನು ಮನ ನೆನೆಯುವದು. ನನಗೇಕೆ ಹೀಗಾಯಿತು? ನಾನೇನು ತಪ್ಪು ಮಾಡಿದೆ? ಯಾವ ಪಾಪದ ಫಲವಿದು? ನನ್ನ ಭವಿಷ್ಯವೇನು? ನಾನೆಷ್ಟು ದಿನ ನೋವಿನಲ್ಲಿರಬೇಕು? ಹೇಗೆಲ್ಲಾ ನೋವು ಅನುಭವಿಸಬೇಕು? ನಾನೆಷ್ಟು ಮೂರ್ಖ? ಹೇಗೆ ಎಡವಿದೆ? ಈ ಎಲ್ಲಾ ವಿಚಾರಗಳಿಂದ ಅಘಾತಗೊಂಡು, ಖೇದಪಟ್ಟು ಏನೂ ಉಪಯೋಗವಿಲ್ಲ, ಆದರೆ ಇವೆಲ್ಲಾ ಮನುಷ್ಯ ಸಹಜ ಭಾವನೆಗಳು, ಅವುಗಳನ್ನು ತಡೆಯುವದಕ್ಕೆ ಸಾಧ್ಯವಿಲ್ಲ. ಅನಾಯಾಸವಾಗಿ ಬಂದ ಈ ಘಟ್ಟಗಳನ್ನು ಆದಷ್ಟು ಬೇಗ ದಾಟಿ ಮೂರನೇ ಹಂತಕ್ಕೆ ನೆಗೆದರೆ ಒಳ್ಳೆಯದು. ಸ್ವೀಕೃತಿ. ಬಂದದ್ದನ್ನು ಸ್ವೀಕರಿಸಿ ಇನ್ನು ನ