೩. ತಜ್ಞರ ಭೆಟ್ಟಿ

ಬೆಂಗಳೂರಿನ ಹಿರಿಯ ತಜ್ಞ ವೈದ್ಯರೊಬ್ಬರನ್ನು ಭೆಟ್ಟಿಯಾಗಲು ಅವರ ಅಪ್ಪೋಯಿಂಟ್ಮೆಂಟ್ ತೆಗೆದುಕೊಂಡೆ. ಅವರ ಮನೆಯಲ್ಲೇ ಇರುವ ಅವರ ಕ್ಲಿನಿಕ್ ಗೆ ಹೋದರೇ, ಅಲ್ಲಿ ಸುಮಾರು ೭-೮  ಜನ ನನಗಿಂತ ಮುಂಚೆನೇ ಬಂದು ಕುಳಿತಿದ್ದರು, ನನ್ನ ನಂತರ ಇನ್ನೂ ೫-೬ ಜನರು ಬಂದರು. ನನ್ನ ಸರದಿ ಬಂದ ಮೇಲೆ ನಾನು ವೈದ್ಯರ ಕೋಣೆಗೆ ಹೋದೆ. ಅಲ್ಲಿಯವರೆಗೂ ಮಾಡಿಸಿದ ರಕ್ತ ತಪಾಸಣಾ ಪತ್ರಗಳನ್ನುಅನುಕ್ರಮವಾಗಿ ಮುಂಚೆಯ ಜೋಡಿಸಿಟ್ಟಿದ್ದೆ, ಅವನ್ನೆಲ್ಲ ಹಾಗೆಯೇ ಅವರ ಕೈಗಿಟ್ಟು ನಾನು ಹೇಳಿದೆ "ಎರಡು ವಾರದಲ್ಲಿ ಮಾಡಿಸಿದ ಪರೀಕ್ಷೆಗಳು" ಅಂತ. ಬೇಗ ಬೇಗನೆ ಅವೆಲ್ಲದರ ಮೇಲೆ ಕಣ್ಣಾಡಿಸಿ, "ನೀವು ಸ್ವಲ್ಪ ಹೊತ್ತು ಆಚೆ ಕುಳಿತುಕೊಂಡು ಇರವ ಎಲ್ಲಾ ಅಪ್ಪೋಯಿಂಟ್ಮೆಂಟ್ ಗಳು ಮುಗಿದ ಮೇಲೆ ಬರ್ತಿರಾ? ಯಾಕೆಂದರೆ ನಿಮ್ಮದು ಸಮಯ ತೆಗೆದುಕೊಳ್ಳುತ್ತದೆ" ಅಂದರು.ನಾನು ಹಾಗೆಯೇ ಮಾಡಿದೆ. ನಾನು ಆಗಲೇ ಒಂದು ಘಂಟೆ ಕಾದು ಕೂತಿದ್ದೆ. ಮತ್ತೆ ಅವರು ಈ ರೀತಿ ಹೇಳಿದ ಮೇಲೆ ಇನ್ನೂ ಒಂದುವರೆ ಘಂಟೆ ಕಾಯುತ್ತಾ ಕುಳಿತೆ. ಏನು ಮಾಡಲಿಕ್ಕಾಗುತ್ತೆ? ನನ್ನ ಹಣೆಬರಹದಲ್ಲಿ ಇನ್ನು ಏನೇನಿದೆಯೋ ಅಂತ ಯೋಚಿಸುತ್ತಾ ಹಾಗೆ ಕುಳಿತೆ. ಎಲ್ಲರ ಸರದಿ ಮುಗಿದ ಮೇಲೆ, ನಾನೊಬ್ಬನೇ ಉಳಿದ ನಂತರ, ನಾನು ಮತ್ತೆ ಕೋಣೆ ಒಳಕ್ಕೆ ಹೋದೆ. ಸುಧೀರ್ಘ ೪೫ ನಿಮಿಷಕ್ಕೂ ಹೆಚ್ಚು ಕಾಲ ಅವರ ಜೊತೆ ನನ್ನ ಚರ್ಚೆ ನಡೆಯಿತು. ರೇಖಾ ಚಿತ್ರದ ಮೂಲಕ ವೈರಾಣು ದೇಹವನ್ನು ಸೇರಿದ ಗಳಿಗೆಯಿಂದ ದೇಹದಲ್ಲಿ ಜೀವ ಇರುವವರೆಗೂ ಏನೇನೂ ಹೇಗ್ಹೇಗೆ ಆಗುತ್ತದೆ ಅನ್ನುವದನ್ನು ಅವರು ಸವಿಸ್ತಾರವಾಗಿ ಹೇಳಿದರು. ದಿನನಿತ್ಯ ಕನಿಷ್ಠ ಮೂರು ಕಿಲೋಮೀಟರ್ ಅಥವಾ ಸತತ ಅರ್ಧ ಘಂಟೆ ನಡೆಯಬೇಕು ಮತ್ತು ಸ್ನಾಯುಗಳ ಸ್ವಾಸ್ಥಕ್ಕಾಗಿ ತೂಕ ಎತ್ತುವ ವ್ಯಾಯಾಮ ಮಾಡಬೇಕು ಎಂದರು. ಈ ನಡೆದಾಡುವ ಮತ್ತು ವ್ಯಾಯಾಮದ ಸಂಗತಿ ಎಲ್ಲ ವೈದ್ಯರೂ ಮಿತ್ರರೂ ಒಂದೇ ರೀತಿಯಾಗಿ ಹೇಳಿದ್ದರು. ಆಹಾರದಲ್ಲಿ ಪ್ರೋಟಿನ್ ಮತ್ತು ಆಂಟಿ ಅಕ್ಸಿಡಂಟ ಇರುವ ಹಣ್ಣು ತರಕಾರಿಗಳನ್ನು ಹೆಚ್ಚಾಗಿ ತಿನ್ನಲು ತಿಳಿಸಿದರು. ಅದನ್ನೆಲ್ಲ ಅವರು ಒಂದು ಕಾಗದದ ಮೇಲೆ ಬರೆಯುತ್ತಿದ್ದರು. 'ನೀನು ಶಖಾಹಾರಿಯಾ ಇಲ್ಲಾ ಮಂಸಾಹರಿಯಾ ಅಂತ ಕೇಳಿದರು,' ನಾನು ಶಾಖಾಹಾರಿ ಅಂದೆ, ಅದಕ್ಕವರು ದಿನಕ್ಕೆ ಅರ್ಧ ಲಿಟರ್ ಹಾಲು ಕುಡಿಯಬೇಕು ಎಂದು ಬರೆದರು. ಮತ್ತೆ 'ನೀನು ಮೊಟ್ಟೆ ತಿನ್ನುತಿಯಾ' ಅಂತ ಕೇಳಿ, ನಾನು ತಿನ್ನಲ್ಲ ಅಂದಿದ್ದಕ್ಕೆ ಅರ್ಧ ಲಿಟರ್ ಅಂತ ಬರೆದಿದ್ದನ್ನು ಅಳಿಸಿ ಒಂದು ಲಿಟರ್ ಅಂತ ತಿದ್ದಿದರು. ಮೇನೆಯಿಂದ ಆಚೆ ಊಟ ತಿಂಡಿ  ಮಾಡುವಾಗ ಎಲ್ಲರೂ ಇಡ್ಲಿ ಜೊತೆ ಚಟ್ನಿ,ಸಾಂಬಾರ ತಿಂದರೆ ನೀನು ಇಡ್ಲಿ ಜೊತೆ ಸಾಂಬಾರ ಮಾತ್ರ ತಿನ್ನಬೇಕು. ಬೇಯಿಸದೆ ಇರುವ ಯಾವುದನ್ನು ನೀನು ಆಚೆ ತಿನ್ನಬಾರದು. ಮನೆಯಲ್ಲಿ ಹಣ್ಣು ಅಥವಾ ತರಕಾರಿಗಳನ್ನು ತಿನ್ನುವಾಗ, ಅವುಗಳನ್ನು ಸ್ವಚ್ಚವಾಗಿ ನೀರಿನಲ್ಲಿ ತೊಳೆದು, ಸಿಪ್ಪೆ ಬಿಡಿಸಿ ತಿನ್ನಬೇಕು, ಇಲ್ಲವೆಂದರೆ ಬ್ಯಾಕ್ಟೆರಿಯಗಳು ನಿನ್ನ ಶರೀರ ಸೇರುವ ಸಂಭವಗಳಿರುತ್ತವೆ. ಔಷಧ ಮೊದಮೊದಲು ಮುಖ್ಯ ಪರಿಣಾಮಗಳನ್ನು ಹೆಚ್ಚು ಮತ್ತು ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುತ್ತಿರುತ್ತದೆ. ಆದರೆ ಬರಬರುತ್ತಾ ಕೆಲವು ವರ್ಷಗಳಲ್ಲಿ ಇದು ತಿರುವು ಮುರುವಾಗಿ ಅಡ್ಡ ಪರಿಣಾಮಗಳೇ ಹೆಚ್ಚಾಗಿ, ಮುಖ್ಯ ಪರಿಣಾಮ ಕಡಿಮೆಯಾಗುತ್ತದೆ ಅಂತ ಹೇಳಿದರು, ಈ ಸಂಗತಿ ನನಗೆ ಇನ್ನೂ ಹೆಚ್ಚು ಭಯ ಹುಟ್ಟಿಸಿತು. ಈ ಭಯದ ಕಾರಣಕ್ಕೆ ನಾನು ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಪ್ರಯತ್ನಿಸೋಣ ಅಂತ ವಿಚಾರಮಾಡಿದೆ.   

Comments

Popular posts from this blog

೧. ಫಲಿತಾಂಶ

೮. ಎ ಆರ್ ಟಿ

೬. ನನ್ನ ಸೂತ್ರ