Posts

೭. ಖಾದ್ಯಗಳು

ಶುದ್ಧ ಶಖಾಹಾರವನ್ನು ಪಾಲಿಸುತ್ತಿದ್ದ ನಾನು ಆಹಾರ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಬೇಕಾಗಿತ್ತು, ಯಾಕೆಂದರೆ ನನಗೆ ಹಣ್ಣುಗಳನ್ನು ತಿನ್ನುವ ಅಭ್ಯಾಸವೇ ಇರಲಿಲ್ಲ. ಹಣ್ಣುಗಳಿಗಿಂತ ಹೆಚ್ಚಾಗಿ ಮನೆಯಲ್ಲಿ ತಯಾರಿಸಿದ ತಿಂಡಿಗಳನ್ನು ತಿನ್ನುವುದೇ ನನ್ನ ರೂಢಿಯಾಗಿತ್ತು. ಮೊದಲ ಬಾರಿ ಕೌನ್ಸಲಿಂಗ್ ಮಾಡಿದ ಸರಕಾರಿ ಅಸ್ಸ್ಪತ್ರೆಯ ಆ ಮಹಿಳೆ ದಿನಾಲೂ ಒಂದು ಕಿವಿ ಹಣ್ಣನ್ನು ತಿನ್ನಲು ಸಲಹೆಯಿತ್ತಿದ್ದಳು. ಹಾಗೆಯೇ ನಂತರದ ಅಲ್ಲೊಪಥಿ ಮತ್ತು ಆಯುರ್ವೇದದ ವೈದ್ಯರೆಲ್ಲರೂ ಕೂಡ ದಿನಾಲೂ ಒಂದಾದರು ಹಣ್ಣು ತಿನ್ನಬೇಕು ಅಂತ ಸೂಚಿಸಿದ್ದರು. ಹಾಲನ್ನು ನಿಯಮಿತವಾಗಿ ದಿನಾಲೂ ಕುಡಿಯಲು ಮತ್ತೆ ಪ್ರಾರಂಭಿಸಿದೆ. ವೈದ್ಯರು ಹೇಳಿದಂತೆ ದಿನಕ್ಕೆ ಒಂದು ಲೀಟರ್ ಕುಡಿಯುವದು ನನಗಾಗದಿದ್ದರೂ ಅರ್ಧ ಲಿಟರ್ ಕುಡಿಯುವದನ್ನು ತಪ್ಪದೇ ರೂಡಿಯಾಗಿಸಿಕೊಂಡೆ.

ಚವನ ಮಹರ್ಷಿಯ ಸೂತ್ರದಿಂದ ತಯಾರಾದ ಚವನ ಪ್ರಾಶವನ್ನು ಸೇವಿಸಿದರೆ ರೋಗ ನಿಯಂತ್ರಕ ಶಕ್ತಿ ವೃದ್ಧಿಸುವದು ಅಂತ ಓದಿ ತಿಳಿದಿದ್ದೆ. ಈ ವಿಷಯ ಮುಂಚೆಯಿಂದಲೂ ಗೊತ್ತಿದ್ದರೂ ನಾನು ಚವನ್ ಪ್ರಾಶ ಎಂದೂ ಸೇವಿಸಿರಲಿಲ್ಲ. ಆದರೆ  ಈಗ ತಕ್ಷಣ ಅದನ್ನು ತಂದು ಅವತ್ತಿನಿಂದ ತಪ್ಪದೇ ದಿನಾಲೂ ಎರಡು ಚಮಚ  ಸೇವಿಸುವದನ್ನುರೂಢಿಯಾಗಿಸಿಕೊಂಡೆ. ಮನೆಯಲ್ಲಿ ಒಂದು ಹಿಡಿಯಷ್ಟು ಮೊಳಕೆ ಕಾಳುಗಳನ್ನು ಮಾಡಿ ದಿನಾಲು ತಿನ್ನಲು ಪ್ರಾರಂಭಿಸಿದೆ. ಒಂದು ದಿನ ಮುಕಣಿ ಇನ್ನೊಂದು ದಿನ ಹೆಸರುಕಾಳು ಮತ್ತೊಂದು ದಿನ ಅಲಸಂದಿ ಮಗದೊಂದು ದ…

೬. ನನ್ನ ಸೂತ್ರ

ವೈರಾಣು ಪತ್ತೆಯ ಪರೀಕ್ಷಾ ಫಲಿತಾಂಶದ ನಂತರ, ವ್ಯಕ್ತಿಯ ಮಾನಸಿಕ ಬದಲಾವಣೆಗಳು ಹೇಗಾಗುತ್ತದೆ ಅನ್ನುವದಕ್ಕೆ ಮೂರು ಹಂತದ ಒಂದು ಸೂತ್ರವನ್ನು ನಾನೇ ಬರೆದುಕೊಂಡೆ.

Shock -  ಆಘಾತ, 
Worry - ಖೇದ,
Accept - ಸ್ವೀಕೃತಿ.

ಈ ವಿಷಯ ತಿಳಿದಾಕ್ಷಣ ಎಲ್ಲರಿಗೂ ಆಘಾತವಾಗುವದು ಸಹಜವೇ. ನನಗೆ ಹೀಗಾಯಿತಲ್ಲಾ, ನಾನು ಸಾವನ್ನು ಬರಮಾಡಿಕೊಳ್ಳುತ್ತಿದ್ದೀನಲ್ಲಾ. ನಾನು ಸಾಯುತ್ತೇನೆ ಅನ್ನುವ ಮಾರಣಾಂತಿಕ ವಿಚಾರವೇ ಮೊದಲು ಮನಸ್ಸಿಗೆ ಬರುವದು. ನಾಳೆನೆ ಸಾಯುತ್ತೇನೆ ಹಾಗನ್ನಿಸುವದು. ಎಷ್ಟೋ ಜನರಿಗೆ ರಾತ್ರಿ ನಿದ್ದೆಯೇ ಬರಲಿಲ್ಲವಂತೆ. ನಾನಂತೂ ಮಲಗುವ ಪ್ರಯತ್ನ ಕೂಡ ಮಾಡಲಿಲ್ಲ.  ಇಂತಹ ಆಘಾತ ಯಾರಿಗೂ ಆಗದಿರಲಿ. ನಿಧಾನಕ್ಕೆ ಈ ಆಘಾತ ದುಃಖವಾಗಿ ಬದಲಾಗುವದು. ಸಾವಿನ ಚಿಂತೆಯಿಂದ ಸ್ವಲ್ಪ ಹಿಂದೆ ಸರಿದು, ಸಾವಿನ ಮುಂಚಿನ ಕಷ್ಟ ನೋವುಗಳನ್ನು ಮನ ನೆನೆಯುವದು. ನನಗೇಕೆ ಹೀಗಾಯಿತು? ನಾನೇನು ತಪ್ಪು ಮಾಡಿದೆ? ಯಾವ ಪಾಪದ ಫಲವಿದು? ನನ್ನ ಭವಿಷ್ಯವೇನು? ನಾನೆಷ್ಟು ದಿನ ನೋವಿನಲ್ಲಿರಬೇಕು? ಹೇಗೆಲ್ಲಾ ನೋವು ಅನುಭವಿಸಬೇಕು? ನಾನೆಷ್ಟು ಮೂರ್ಖ? ಹೇಗೆ ಎಡವಿದೆ? ಈ ಎಲ್ಲಾ ವಿಚಾರಗಳಿಂದ ಅಘಾತಗೊಂಡು, ಖೇದಪಟ್ಟು ಏನೂ ಉಪಯೋಗವಿಲ್ಲ, ಆದರೆ ಇವೆಲ್ಲಾ ಮನುಷ್ಯ ಸಹಜ ಭಾವನೆಗಳು, ಅವುಗಳನ್ನು ತಡೆಯುವದಕ್ಕೆ ಸಾಧ್ಯವಿಲ್ಲ. ಅನಾಯಾಸವಾಗಿ ಬಂದ ಈ ಘಟ್ಟಗಳನ್ನು ಆದಷ್ಟು ಬೇಗ ದಾಟಿ ಮೂರನೇ ಹಂತಕ್ಕೆ ನೆಗೆದರೆ ಒಳ್ಳೆಯದು. ಸ್ವೀಕೃತಿ. ಬಂದದ್ದನ್ನು ಸ್ವೀಕರಿಸಿ ಇನ್ನು ನನ್ನ ಜ…

೫ ಸಮಸ್ಥಿತಿಯ ಇತರರು (ನನ್ನಂಥವರ ಜೊತೆ ಚರ್ಚೆ)

ವಿಷಯ ತಿಳಿದ ೭-೮ ದಿನಗಳಲ್ಲಿ ನನ್ನ ವೈದ್ಯ ಮಿತ್ರ ನನಗೆ ಒಂದು ಸಲಹೆ ಕೊಟ್ಟ "ಕೆಲವು ಅಂತರ್ಜಾಲದಲ್ಲಿರುವ ಸಮೂಹಗಳಲ್ಲಿ ನೊಂದಾಯಿಸಿಕೊ, ಅಲ್ಲಿ ಆಗಲೇ ನೊಂದಾಯಿತ ಜನರ ಜೊತೆ ಚರ್ಚಿಸು, ಮಾಹಿತಿ ಕಲೆ ಹಾಕು, ನಿನಗೆ ಆತ್ಮ ವಿಶ್ವಾಸ ಹೆಚ್ಚುತ್ತದೆ" ಅಂತ. ಮೊದಲಿಗೆ ನನಗೆ ಯಾರು ಏನೇ ಹೇಳಿದರೂ ನನ್ನ ತಲೆಗೆ ಹತ್ತುತ್ತಿರಲಿಲ್ಲ. ಹಾಗೆಯೇ ಈ ಸಲಹೆಯ ಬಗ್ಗೆ ಕೂಡ ನಾನು ಅಷ್ಟಾಗಿ ಯೋಚಿಸಲಿಲ್ಲ. ಆದರೆ ನನಗೆ ಆಯುರ್ವೇದ ಔಷಧಿಯ ಮಾಹಿತಿ ಎಲ್ಲೂ ಸಿಗದಿದ್ದಾಗ ನನಗೆ ನನ್ನ ಮಿತ್ರ ಹೇಳಿದ ಸಲಹೆ ನೆನಪಾಗಿ ಒಂದು ಆಲೋಚನೆ ಹೊಳೆಯಿತು. ಯಾಕೆ ನಾನು ಅಂತರ್ಜಾಲದ ಸಮೂಹದಲ್ಲಿರುವವರನ್ನು ಆಯುರ್ವೇದ ಔಷಧಿ ಬಗ್ಗೆ ಖುದ್ದಾಗಿ ಕೇಳಬಾರದು. ಹಾಗೆ ಯೋಚಿಸಿದ್ದೆ ತಡ, ನಾನು ತಕ್ಷಣ ಒಂದು ಸಾಮಾಜಿಕ ತಾಣದಲ್ಲಿ ನನ್ನದೊಂದು ಮಿಥ್ಯ ಖಾತೆ ತೆರೆದೆ. ನಿಧಾನಕ್ಕೆ ಒಂದೊಂದಾಗಿ ಹಲವು ಜನರ ಸಂಪರ್ಕ ಸಾಧ್ಯವಾಯಿತು.

ನಾನು ಎಷ್ಟು ಜನರನ್ನು ಮಾಹಿತಿಗೋಸ್ಕರ ಸಂಪರ್ಕಿಸಿದೆನೋ ಅವರೆಲ್ಲ ಅಲ್ಲೊಪಥಿ ಔಷಧಿಯನ್ನೇ ಅವಲಂಭಿಸದವರಾಗಿದ್ದರು. ಒಂದಿಬ್ಬರು ಪ್ರಾರಂಭದಲ್ಲಿ ಆಯುರ್ವೇದ ಔಷಧಿ ತೆಗೆದುಕೊಂಡರೂ ಅವರು ಕೂಡ ಸ್ವಲ್ಪ ಸಮಯದ ನಂತರ ಅಲ್ಲೊಪಥಿಗೆ ಶರಣಾಗಿದ್ದರು. ಅಲ್ಲೊಪಥಿ ಅವಲಂಬನೆ ಎಲ್ಲರಿಗೂ ಅನಿವಾರ್ಯವಾಗಿತ್ತು. ಮೊದಲೆಲ್ಲ ಈ ರೀತಿ ಸಿಕ್ಕವರು ಕೂಡ ಎಆರ್ಟಿಯೇ ಒಳ್ಳೆಯದು ಅದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಹೇಳುವವರೇ ಇದ್ದರು. ನಂತರ ಕೆಲವು ವಿಚಿತ್ರ ಹಾಗೂ ವಿಭ…

೪. ವ್ಯಥೆ

ಒಂದು ಸಣ್ಣ ತಪ್ಪು, ಒಂದು ಚಿಕ್ಕ ನಿರ್ಲಕ್ಷ್ಯದ ಹೆಜ್ಜೆ ಹೇಗೆ ಇಷ್ಟು ದೊಡ್ಡ ಪರಿಣಾಮ ಬೀರಿತು. ನನ್ನ ಜೀವನವನ್ನು ಸರಿಪಡಿಸಲಾಗದಂತೆ ಶಿಕ್ಷಿಸುತ್ತಿದೆಯಲ್ಲಾ ಅಂತ ಸದಾ ಪರಿತಪಿಸುವಂತೆ ಆಯಿತು. ಆ ಭಗವಂತ ಎರಡನೆಯ ಅವಕಾಶವನ್ನು ಕೊಡಲಿಲ್ಲ, ಆಗಿರುವ ತಪ್ಪನ್ನು ಮೊದಲ ಸಾರಿಯಲ್ಲೇ ತಿದ್ದಿಕೊಳ್ಳಲು ಸಾಧ್ಯವೂ ಇಲ್ಲ. ಬದುಕಿರುವವರೆಗೂ ಇದನ್ನು ಶರೀರದಲ್ಲಿ ಇಟ್ಟುಕೊಂಡು ಸಾಗಬೇಕು.ಇರುವವರೆಗೂ ಸದಾ ಎಚ್ಚರದಿಂದಿರಬೇಕು, ನನ್ನಿಂದ ಮತ್ತೊಬ್ಬರಿಗೆ ಹರಡಬಾರದು ಅಲ್ಲದೆ ನನ್ನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಅನಾರೋಗ್ಯ ಹೆಚ್ಚಾಗದಂತೆ ನೋಡಿಕೊಳ್ಳಬೇಕು. ಮುಂಚೆಯಿದ್ದ ಹಾಗೆ ಎಲ್ಲಂದರಲ್ಲಿ ಏನಂದರೆಲ್ಲ ಹೇಗೆಂದರೆ ಹಾಗೆ ಇರುವದಕ್ಕಾಗಲ್ಲ. ಯಾವಾಗಲೋ ಒಮ್ಮೆ ವಾರಕ್ಕೊಂದರಂತೆ ಸೇದುತ್ತಿದ್ದ ಸಿಗರೇಟ್ ಬಿಡಬೇಕಾಯಿತು. ನಾನು ಸಿಗರೇಟ್ ಚಟಗಾರನಲ್ಲದಿದ್ದರೂ, ಬೇಕೆಂದಾಗ ಒಮ್ಮೊಮ್ಮೆ ಒಂದು ಸೇದುತ್ತಿದ್ದೆ. ಈಗ ಬೇರೆಯರು ಯಾವುದೇ ಮುಲಾಜಿಲ್ಲದೇ ಹಾಯಾಗಿ ಸೇದುವದನ್ನು ನೋಡಿ ನಾನು ಸೇದಕ್ಕಾಗಲ್ಲವಲ್ಲ ಅಂತ ಖೇದವಾಗುತ್ತದೆ. ಸಿಗರೇಟ್ ಸೇದುವದೇನು ಒಳ್ಳೆಯ ವಿಚಾರವಲ್ಲದಿದ್ದರೂ, ಸೇದುವವರ ಸ್ವೇಚ್ಛಾಚಾರ ನನಗಿಲ್ಲವಲ್ಲ ಅಂತ ಅನಿಸುವದು. ಅತೀವ ಸಿಹಿ ತಿಂದು ಮಧುಮೇಹವಾಗಿದ್ದರೂ ಸಹಿಸಿಕೊಳ್ಳಬಹುದಾಗಿತ್ತು, ಧುಮಪಾನದಿಂದ ಕ್ಯಾನ್ಸರ್ ಆಗಿದ್ದರೂ ಕೂಡ ಬಹುಶಃ ಮನಸ್ಸು ಇಷ್ಟು ಸೋಲುತ್ತಿರಲಿಲ್ಲ, ಮದ್ಯಪಾನದಿಂದ ಯಕೃತ್ತು ಕೆಟ್ಟು ಹೋಗಿದ್ದರೂ ಇಷ್ಟು ಜರ್ಜರಿತನಾಗುತ್…

೩. ತಜ್ಞರ ಭೆಟ್ಟಿ

ಬೆಂಗಳೂರಿನ ಹಿರಿಯ ತಜ್ಞ ವೈದ್ಯರೊಬ್ಬರನ್ನು ಭೆಟ್ಟಿಯಾಗಲು ಅವರ ಅಪ್ಪೋಯಿಂಟ್ಮೆಂಟ್ ತೆಗೆದುಕೊಂಡೆ. ಅವರ ಮನೆಯಲ್ಲೇ ಇರುವ ಅವರ ಕ್ಲಿನಿಕ್ ಗೆ ಹೋದರೇ, ಅಲ್ಲಿ ಸುಮಾರು ೭-೮  ಜನ ನನಗಿಂತ ಮುಂಚೆನೇ ಬಂದು ಕುಳಿತಿದ್ದರು, ನನ್ನ ನಂತರ ಇನ್ನೂ ೫-೬ ಜನರು ಬಂದರು. ನನ್ನ ಸರದಿ ಬಂದ ಮೇಲೆ ನಾನು ವೈದ್ಯರ ಕೋಣೆಗೆ ಹೋದೆ. ಅಲ್ಲಿಯವರೆಗೂ ಮಾಡಿಸಿದ ರಕ್ತ ತಪಾಸಣಾ ಪತ್ರಗಳನ್ನುಅನುಕ್ರಮವಾಗಿ ಮುಂಚೆಯ ಜೋಡಿಸಿಟ್ಟಿದ್ದೆ, ಅವನ್ನೆಲ್ಲ ಹಾಗೆಯೇ ಅವರ ಕೈಗಿಟ್ಟು ನಾನು ಹೇಳಿದೆ "ಎರಡು ವಾರದಲ್ಲಿ ಮಾಡಿಸಿದ ಪರೀಕ್ಷೆಗಳು" ಅಂತ. ಬೇಗ ಬೇಗನೆ ಅವೆಲ್ಲದರ ಮೇಲೆ ಕಣ್ಣಾಡಿಸಿ, "ನೀವು ಸ್ವಲ್ಪ ಹೊತ್ತು ಆಚೆ ಕುಳಿತುಕೊಂಡು ಇರವ ಎಲ್ಲಾ ಅಪ್ಪೋಯಿಂಟ್ಮೆಂಟ್ ಗಳು ಮುಗಿದ ಮೇಲೆ ಬರ್ತಿರಾ? ಯಾಕೆಂದರೆ ನಿಮ್ಮದು ಸಮಯ ತೆಗೆದುಕೊಳ್ಳುತ್ತದೆ" ಅಂದರು.ನಾನು ಹಾಗೆಯೇ ಮಾಡಿದೆ. ನಾನು ಆಗಲೇ ಒಂದು ಘಂಟೆ ಕಾದು ಕೂತಿದ್ದೆ. ಮತ್ತೆ ಅವರು ಈ ರೀತಿ ಹೇಳಿದ ಮೇಲೆ ಇನ್ನೂ ಒಂದುವರೆ ಘಂಟೆ ಕಾಯುತ್ತಾ ಕುಳಿತೆ. ಏನು ಮಾಡಲಿಕ್ಕಾಗುತ್ತೆ? ನನ್ನ ಹಣೆಬರಹದಲ್ಲಿ ಇನ್ನು ಏನೇನಿದೆಯೋ ಅಂತ ಯೋಚಿಸುತ್ತಾ ಹಾಗೆ ಕುಳಿತೆ. ಎಲ್ಲರ ಸರದಿ ಮುಗಿದ ಮೇಲೆ, ನಾನೊಬ್ಬನೇ ಉಳಿದ ನಂತರ, ನಾನು ಮತ್ತೆ ಕೋಣೆ ಒಳಕ್ಕೆ ಹೋದೆ. ಸುಧೀರ್ಘ ೪೫ ನಿಮಿಷಕ್ಕೂ ಹೆಚ್ಚು ಕಾಲ ಅವರ ಜೊತೆ ನನ್ನ ಚರ್ಚೆ ನಡೆಯಿತು. ರೇಖಾ ಚಿತ್ರದ ಮೂಲಕ ವೈರಾಣು ದೇಹವನ್ನು ಸೇರಿದ ಗಳಿಗೆಯಿಂದ ದೇಹದಲ್ಲಿ ಜೀವ ಇ…

೨. ಪರಿಣಾಮ

ನನ್ನ ಹೆಂಡತಿ ತವರಲ್ಲಿ ಇದ್ದುದರಿಂದ ತಕ್ಷಣ ಅವಳನ್ನು ಕರೆತರುವ ನಿರ್ಧಾರಮಾಡಿ, ಅವತ್ತೇ ಸಾಯಂಕಾಲ ಅವಳ ಊರಿಗೆ ರೈಲಿನ ಸಾಮಾನ್ಯ ಭೋಗಿಯಲ್ಲಿ ಕೂತು ಹೊರಟೆ. ನಾಳೆಯೇ ಅವಳನ್ನು ಇಲ್ಲಿಗೆ ಕರೆತಂದು ರಕ್ತ ಪರೀಕ್ಷೆ ಮಾಡಿಸೋಣ ಅಂತ ನಿಶ್ಚಯಿಸಿದೆ. ಭಗವಂತ ಅವಳನ್ನು ಸುರಕ್ಷಿತವಾಗಿಡಲಿ ಅಂತ ಬೇಡಿಕೊಳ್ಳುತ್ತಿದೆ. ಪ್ರಯಾಣದಲ್ಲಿ ಒಂದೆರಡು ಸಾರಿ ದುಃಖ ಉಮ್ಮಳಿಸಿಬಂದು, ಕಣ್ಣೀರು ತಾನಾಗೇ ಹರಿದಿದ್ದವು. ಹಾಗೂ ಹೀಗೂ ಮಾಡಿ ಸಹಪ್ರಯಾಣಿಕರಿಂದ ಮುಖ ಮುಚ್ಚಿಕೊಂಡು ಯಾರಿಗೂ ಗೊತ್ತಾಗದಂತೆ ಸಾಕಷ್ಟು ಅತ್ತಿದ್ದೆ, ಅದನ್ನೆಲ್ಲ ಮರೆಮಾಚಿ ಹುಸಿನಗೆಯೊಂದಿಗೆ ಬೆಳಿಗ್ಗೆ ಅತ್ತೆಯ ಮನೆ ಸೇರಿದ್ದೆ, ನನ್ನ ನೋಡಿದ ಕ್ಷಣದಲ್ಲೇ ಅತ್ತೆ ನನ್ನ ಪರಿಸ್ಥಿತಿ ಅರಿತು "ಈ ಸಾರಿ ತುಂಬಾ ಕಳೆಗುಂದಿದ್ದಾನೆ, ಸೊರಗಿ ಹೋಗಿದ್ದಾನೆ" ಅಂತ ಗೊಣಗುತ್ತಿದ್ದಳು. ನನ್ನ ಸ್ಥಿತಿಯನ್ನು ನಾನೆಷ್ಟು ಮುಚ್ಚಿಡಲು ಪ್ರಯತ್ನಿಸಿದರೂ ನನ್ನಿಂದಾಗಿರಲಿಲ್ಲ. ಮೊದಲೇ ಸೊರಗಿ ಅಲ್ಪಸ್ವಲ್ಪಯಿರುವ ಹೊಟ್ಟೆಯ ಬೊಜ್ಜು ಕರಗಿ ಹೋಗಿತ್ತು, ಅದರೊಟ್ಟಿಗೆ ಸದಾ ನಗುನಗುತ್ತಾ ಎಲ್ಲರನ್ನು ಮಾತಾಡಿಸಿಕೊಂಡು ಬರುವ ನಾನು, ಈ ಸಾರಿ ಮುಖ ಕಪ್ಪಿಟ್ಟುಕೊಂಡು ಬಂದಿರುವದನ್ನು ನೋಡಿ, ಅತ್ತೆಯ ಮನೆಯವರೆಲ್ಲ ಹಳಹಳಿಸಿದ್ದರು. ಪ್ರತಿ ಸಾರಿ ನನ್ನ ಮಕ್ಕಳು ಊರಿಗೆ ಹೋದಾಗ ಕೆಲವು ದಿನಗಳ ನಂತರ ಅವರನ್ನು ಕಂಡಾಗ ನನಗಾಗುವ ಆನಂದ ಈ ಸಾರಿ ನನಗಾಗಲಿಲ್ಲ. ಸುಮ್ಮನೆ ತುಟಿ ಅಗಲಿಸಿ ನಗುವ ಹಾಗೆ ಮಾಡಿ ಮಗನನ್ನು ಎ…

೧. ಫಲಿತಾಂಶ

ರಕ್ತವನ್ನು ಒಂದು ಪ್ಲಾಸ್ಟಿಕ್ ಸೀಸೆಯಲ್ಲಿ ಮೆಲ್ಲಗೆ ನಗುನಗುತಾ, ನೋವಾಗದಂತೆ ಹೀರಿಕೊಂಡ ಷೂಶ್ರುಕಿ ಅಷ್ಟೇನೂ ಕ್ರೂರಿಯಾಗಿ ಕಾಣಲಿಲ್ಲ ಆದರೆ ಅವಳು ಮಾಡಿದ ರಕ್ತ ಪರೀಕ್ಷೆಯ ಫಲಿತಾಂಶ ಮಾತ್ರ ತುಂಬಾ ಕ್ರೂರವಾಗಿ ನೋವನ್ನು ಕೊಟ್ಟಿತ್ತು. ಆ ಕ್ರೂರತೆ ನನ್ನಲ್ಲಿ ಎಂದೂ ಕಾಣದ ಭಯ ಮತ್ತು ದುಃಖಗಳನ್ನು ತಂದಿಟ್ಟಿತ್ತು. ರಕ್ತ ಪರೀಕ್ಷೆಯ ಫಲಿತಾಂಶವನ್ನು ನನಗೆ ಆಘಾತವಾಗದ ರೀತಿಯಲ್ಲಿ ಹೇಳಲು ನನ್ನೆದುರಿಗೆ ಕುಳಿತ ವ್ಯಕ್ತಿ ನನಗೆ ಫಲಿತಾಂಶ ತಿಳಿಸಿ ಕೌನ್ಸೆಲಿಂಗ್ ಮಾಡಿ ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದ. "ಇದೇನೂ ಅಷ್ಟು ಭಯ ಬೀಳುವಂತಹ ರೋಗವಲ್ಲ, ಈಗ ಇದಕ್ಕೆ ಔಷಧಿಯಿದೆ, ಸಂಪೂರ್ಣ ಗುಣವಾಗದಿದ್ದರೂ, ನೀವು ಸಾಮಾನ್ಯ ಜೀವನ ನಡೆಸಬಹುದು" ಅಂತ ಪರಿ ಪರಿಯಾಗಿ ಹೇಳುತಿದ್ದ. ಅದೆಲ್ಲ ನನಗೆ ಆವಾಗ ಗೊತ್ತಿಲ್ಲದ  ವಿಷಯವಾಗಿದ್ದರೂ ಆ ಗಳಿಗೆಯಲ್ಲಿ ನನಗೆ ಅವನು ಹೇಳುವ ಯಾವುದೇ ವಿಷಯವನ್ನು ಅರಿತುಕೊಳ್ಳುವ ಅಥವಾ ಅವನ ಸಮಾಧಾನದ ಸಾಂತ್ವನದ ಮಾತು ಕೇಳುವ ಸ್ಥಿತಿಯಲ್ಲಿ ನಾನಿರಲಿಲ್ಲ. "ನೀವು ಆಘಾತಕ್ಕೊಳಗಾಗ ಬೇಡಿ, ಧೈರ್ಯದಿಂದಿರಿ" ಎಂದು ಅವನು ಒತ್ತಿ  ಹೇಳುತ್ತಿದ್ದ. ನಾನು "ಇಲ್ಲಾ ನೀವು ಹೇಳಿ" ಅಂತದ್ದೆ. "ನಿಮ್ಮ ಮುಖದಲ್ಲಿ ನನಗೆ ಆಘಾತ ಕಾಣಿಸುತ್ತಿದೆ ಅದಕ್ಕೆ ಹೇಳಿದ್ದು" ಅಂತ ನನಗೆ ಸಾಬೀತಿನ ಜೊತೆಗೆ ತನ್ನ ಮಾತನ್ನು ಬಲಪಡಿಸಿ ಹೇಳಿದ. ಆ ಘಳಿಗೆಯಲ್ಲಿ ನನಗಾದ ಭಯ, ಆಘಾತ, ದುಃಖ ನನಗೆ ಬಚ್ಚಿಡಲಾಗ…